ಡೇವಿಡ್ ವುಡಾರ್ಡ್ (ಹುಟ್ಟಿದ್ದು ಏಪ್ರಿಲ್ 6, 1964) ಒಬ್ಬ ಅಮೆರಿಕನ್ ಬರಹಗಾರರು ಮತ್ತು ಸಂಗೀತಗಾರರು. 1990 ದಶಕದಲ್ಲಿ ಅವರು ಪ್ರೇಕ್ವಿಯಂ () ಎಂಬ ಪದವನ್ನು ಕಂಡುಹಿಡಿದರು. ಇದು ಪ್ರಿಎಂಪ್ಟಿವ್ () ಮತ್ತು ರಿಕ್ವಿಯಂ () ಎಂಬ ಎರಡು ಪದಗಳ ಸಂಗಮವಾಗಿದೆ. ಇದು ಓರ್ವ ವ್ಯಕ್ತಿಯ ಮರಣದ ಸಮಯದಲ್ಲಿ ಅಥವಾ ಮರಣದ ಸ್ವಲ್ಪ ಸಮಯದ ಮುಂಚೆ ಅವರಿಗಾಗಿಯೇ ಸಂಯೋಜಿಸಿದ ಸಂಗೀತವನ್ನು ನುಡಿಸುವ ಒಂದು ಬೌದ್ಧ ಸಂಪ್ರದಾಯದ ಹೆಸರು. ಲಾಸ್ ಎಂಜಿಲೆಸ್ ಮೆಮೋರಿಯಲ್ ಸರ್ವಿಸಸ್ ನಲ್ಲಿ ವುಡಾರ್ಡ್ ಸಂಗೀತಗಾರರಾಗಿ ಕೆಲಸ ಮಾಡುತಿದ್ದಾಗ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದರು, ಅದರಲ್ಲಿ 2001ರಲ್ಲಿ ಏಂಜಲ್ಸ್ ಫ್ಲೈಟ್ ಫುನಿಕ್ಯುಲರ್ ರೈಲ್ವೆಯಲ್ಲಿ (ಈಗ ಬಳಕೆಯಲ್ಲಿಲ್ಲ) ಲಿಯಾನ್ ಪ್ರಪೋರ್ಟ್ ಮತ್ತು ಅವರ ಗಾಯಗೊಂಡ ವಿಧವೆ ಲೋಲ ಅವರ ಅಪಘಾತದ ಸಂದರ್ಭದ ನೆನಪಿಗಾಗಿ ನಡೆಸಿಕೊಟ್ಟ ನಾಗರಿಕ ಸಮಾರಂಭವೂ ಒಂದು.: 125 ಅವರು ಕಾಡುಪ್ರಾಣಿಗಳ ರಿಕ್ವಿಯಂ ನಡೆಸಿಕೊಟ್ಟಿದ್ದಾರೆ, ಅದರಲ್ಲಿ ಕ್ಯಾಲಿಫೋರ್ನಿಯಾ ಬ್ರೌನ್ ಪೆಲಿಕನ್ ಕಡಲಿನಲ್ಲಿ ಗಾಯಗೊಂಡಿದ್ದಾಗ ನಡೆಸಿಕೊಟ್ಟ ಕಾರ್ಯಕ್ರಮವೂ ಸೇರಿದೆ. ವುಡಾರ್ಡ್ ಅವರು ಡ್ರೀಮ್ ಮಷೀನ್ ನ ನಕಲುಗಳಿಗೆ ಪ್ರಖ್ಯಾತರಾಗಿದ್ದರು, ಅದು ಒಂದು ಮನಃಪರಿವರ್ತನೆ ಮಾಡಬಲ್ಲ ದೀಪವಾಗಿತ್ತು. ಪ್ರಪಂಚದ ಹಲವಾರು ವಸ್ತು ಸಂಗ್ರಹಾಲಯಗಳಲ್ಲಿ ಅದನ್ನು ವೀಕ್ಷಿಸಬಹುದು. ಜರ್ಮನಿ ಮತ್ತು ನೇಪಾಳದಲ್ಲಿ ಡೇರ್ ಫ್ರೆಂಡ್ ಎಂಬ ಪತ್ರಿಕೆಗೆ ಅವರ ಕೊಟ್ಟ ಕೊಡುಗೆಗೆ ಹೆಸರುವಾಸಿ. ಈ ಪತ್ರಿಕೆಯಲ್ಲಿ ಅವರು ಇಂಟೆರ್ ಸ್ಪೀಸೀಸ್ ಕರ್ಮ, ಸಸ್ಯ ಪ್ರಜ್ಞೆ ಮತ್ತು ಪರಾಗ್ವ ಸೆಟಲ್ಮೆಂಟ್ ನೇವ ಜೆರ್ಮನಿಯ ಎಂಬ ಬರಹಗಳಿಗೆ ಪ್ರಖ್ಯಾತರು. == ಶಿಕ್ಷಣ == ವುಡಾರ್ಡ್ ಅವರು ದಿ ನ್ಯೂ ಸ್ಕೂಲ್ ಫಾರ್ ಸೋಶಿಯಲ್ ರಿಸರ್ಚ್ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾ ದಲ್ಲಿ ಶಿಕ್ಷಣ ಪಡೆದಿದ್ದಾರೆ. == ನೇವ ಜೆರ್ಮನಿಯ == 2003ರಲ್ಲಿ ವುಡಾರ್ಡ್ ಜುನಿಪರ್ ಹಿಲ್ಸ್ (ಲಾಸ್ ಎಂಜೆಲಸ್ ಕೌಂಟಿ) ಕೌನ್ಸಿಲ್ ಮ್ಯಾನ್ ಆಗಿ ಆಯ್ಕೆಯಾಗಿದ್ದರು. ಈ ಸಮಯದಲ್ಲಿ ಅವರು ನೇವ ಜೆರ್ಮನಿಯ ನಗರದೊಂದಿದೆ ಉತ್ತಮ ಬಾಂದವ್ಯ ಹೊಂದುವಲ್ಲಿ ಕೆಲಸ ಮಾಡಿದರು. ಅವರ ಈ ಯೋಜನೆಗಾಗಿ, ವುಡಾರ್ಡ್ ಹಿಂದೆ ಸಸ್ಯಾಹಾರಿ ಮತ್ತು ಸ್ತ್ರೀವಾದಿ ತತ್ವದ ಯುಟೋಪಿಯ ಗೆ ತೆರಳಿ ಅಲ್ಲಿನ ಮುನಿಸಿಪಲ್ ನಾಯಕರನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲಿ ಸಂಬಂಧ ಮುಂದುವರೆಸಬಾರದೆಂದು ತಿಳಿದ ಅವರು ನಂತರ ಅವರ ಬರವಣಿಗೆಗೆ ಉತ್ತಮ ಆಯ್ಕೆ ಎಂದು ಅರಿತರು. ಅವರಿಗೆ ಪ್ರತ್ಯೇಕವಾಗಿ ಇವರ ಬಗ್ಗೆ ಒಲವಿತ್ತು—ಮೂಲ ಮಾನವತಾವಾದಿ ತತ್ವಗಳನ್ನು ಪ್ರಚಾರ ಮಾಡಿದ ರಿಚರ್ಡ್ ವಾಗ್ನರ್ ಮತ್ತು 1886 ರಿಂದ 1889 ವರೆಗೂ ಒಂದು ಒಂದು ಹೊಸ ವಸಾಹತುವಿನಲ್ಲಿ ತನ್ನ ಗಂಡ ಬರ್ನಾರ್ಡ್ ಫೋರ್ಸ್ಟರ್ ನ ಜೊತೆ ವಾಸವಿದ್ದ ಎಲಿಸಬೆತ್ ಫೋರ್ಸ್ಟರ್-ನಿಯೇಟ್ಜ್ಷೆ. 2004 ರಿಂದ 2006 ರವರೆಗೆ ವುಡಾರ್ಡ್ ಅವರು ಆಗಿನ ಅಮೇರಿಕಾ ಉಪಾಧ್ಯಕ್ಷ ಡಿಕ್ ಚೆನೇ ಅವರ ಪರವಾಗಿ ನೇವ ಜೆರ್ಮನಿಯದಲ್ಲಿ ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದರು. 2011ರಲ್ಲಿ ವುಡಾರ್ಡ್ ಸ್ವಿಸ್ ಕಾದಂಬರಿಕಾರ ಕ್ರಿಶ್ಚಿಯನ್ ಕ್ರಾಚ್ ಅವರಿಗೆ ತಮ್ಮ ನೇವ ಜೆರ್ಮನಿಯಗೆ: 113–138 ಸಂಬಂಧಿಸಿದ ಎರಡು ಸಂಪುಟಗಳ ಬರಹವನ್ನು ಹ್ಯಾನೋವರ್ ವಿಶ್ವವಿದ್ಯಾಲಯದ ಅಡಿಯಲ್ಲಿ (ಮುದ್ರಣ—ವರ್ಹಾನ್ ವೆರ್ಲಾಗ್) ಪ್ರಕಟಿಸಲು ಆಮೋದಿಸಿದರು.: 180–189 ಪತ್ರಗಳ ಮೂಲಕ, ಫ್ರಾಂಕ್ಫುರ್ಟರ್ ಅಲ್ಜಿಮೀನ್ ಜಿತಂಗ್ “[ವುಡಾರ್ಡ್ ಮತ್ತು ಕ್ರಾಚ್) ಜೀವನ ಮತ್ತು ಕಲೆಯ ಗಡಿಯನ್ನು ಅಳಿಸುವರು” ಎಂದು ಹೇಳಿದ್ದಾರೆ. ದರ್ ಸ್ಪೀಗಲ್ ರವರು ಫೈವ್ ಇಯರ್ಸ್ ( ) ಸಂಪುಟ ಒಂದನ್ನು ಕ್ರಾಚ್ ರವರ ಇಂಪಿರಿಯಂ ಕಾದಂಬರಿಗೆ “ಆಧ್ಯಾತ್ಮಿಕ ತಯಾರಿಯ ಬರಹ” ಎಂದಿದ್ದಾರೆ. ಆಂಡ್ರೂ ಮೆಕ್ಕಾನ್ ಅವರ ಪ್ರಕಾರ, ವುಡಾರ್ಡ್ ಅವರು “ಮೂಲ ನಿವಾಸಿಗಳ ವಾರಸುದಾರರು ಪಳಯುಳಿಕೆಗಳಲ್ಲಿ ವಾಸಿಸುವ ಸ್ಥಳಕ್ಕೆ ದಾರಿ” ಎಂದು ಕೊಂಡಾಡಿದ್ದಾರೆ. ವುಡಾರ್ಡ್ ಅವರು “ಸಮುದಾಯದ ಉತ್ಕೃಷ್ಟ ಸಂಪ್ರದಾಯಕ್ಕೆ ಹೋಗಿ ಎಲಿಸಬೆತ್ ಫೋರ್ಸ್ಟರ್-ನಿಯೇಟ್ಜ್ಷೆ ಅವರ ಪೂರ್ವಜರ ಮನೆಯ ಜಾಗದಲ್ಲಿ ಬೇರುತ್ ಒಪೇರಾ ಹೌಸ್ ನಿರ್ಮಿಸಲು ಹೋಗಿದ್ದಾರೆ” ಎಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನೇವ ಜೆರ್ಮನಿಯ ಒಂದು ಉತ್ತಮ ನಗರವಾಗಿದ್ದು ಹಲವು ಹೋಟೆಲ್ ಸೌಕರ್ಯಗಳು ಮತ್ತು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ಹೊಂದಿದೆ. == ಡ್ರೀಮ್ ಮಷೀನ್ == 1989 ರಿಂದ 2007 ರವರೆಗೆ ವುಡಾರ್ಡ್ ಡ್ರೀಮ್ ಮಷೀನ್ ನ ನಕಲುಗಳನ್ನು ತಯಾರಿಸಿದರು. ಬ್ರಯಾನ್ ಜಿಸಿನ್ ಮತ್ತು ಇಯಾನ್ ಸೋಮೆರ್ವಿಲ್ ತಯಾರಿಸಿದ ಸ್ಟ್ರಾಬೋಸ್ಕೋಪಿಕ್ ಕಾಂಟ್ರಿವಾನ್ಸ್ ಒಂದು ಕಂಚು ಅಥವಾ ಕಾಗದ ಸುತ್ತುವ ವಿದ್ಯುತ್ ದೀಪದಿಂದ ಮಾಡಿದ ಒಂದು ಸಾಧನವಾಗಿದೆ. ಇದನ್ನು ಮುಚ್ಚಿದ ಕಣ್ಣಿನಿಂದ ಗಮನಿಸಿದಾಗ ಮಾನಸಿಕ ಭಾವನೆಗಳಿಂದ ಕನಸು ಅಥವಾ ಮಾದಕ ವಸ್ತುಗಳಿಂದ ಆಗುವ ಅನುಭವವಾಗುತ್ತದೆ. ವುಡಾರ್ಡ್ ಅವರು ಒಂದು ಡ್ರೀಮ್ ಮಷೀನ್ ಅನ್ನು ವಿಲಿಯಂ ಎಸ್ ಬರೋ ಅವರ 1996 ಎಲ್.ಎ.ಸಿ.ಎಂ.ಎ ದೃಶ್ಯಗೋಚರ ಪೋರ್ಟ್ಸ್ ಆಫ್ ಎಂಟ್ರಿ ಗೆ ಕೊಡುಗೆ ನೀಡಿದರು. ನಂತರ ಅವರು ಬರಹಗಾರರ ಸ್ನೇಹ ಗಳಿಸಿ ಅವರಿಗೆ ಬೊಹೆಮಿಯನ್ ಮಾಡೆಲ್ (ಕಾಗದ) ಡ್ರೀಮ್ ಮಷೀನ್ ಅನ್ನು ಅವರ 83ನೇ ಮತ್ತು ಕೊನೆಯ ಹುಟ್ಟಿದ ಹಬ್ಬಕ್ಕೆ ಕೊಡುಗೆ ಕೊಟ್ಟರು.: 23 ಸೋತಬಿ ಅವರು ಮೊದಲ ಮಷೀನ್ ಅನ್ನು ಓರ್ವ ಖಾಸಗಿ ಸಂಗ್ರಾಹಕರಿಗೆ 2002 ರಲ್ಲಿ ಹರಾಜಿನಲ್ಲಿ ಕೊಟ್ಟರು ಮತ್ತು ಉಳಿದ ಮಷೀನ್ ಬರೋ ಅವರು ಸ್ಪೆನ್ಸರ್ಸ್ ಮ್ಯೂಸಿಯಂ ಆಫ್ ಆರ್ಟ್ ನಿಂದ ಪಡೆದ ಬರೋಸ್ ಎಸ್ಟೇಟ್ ಸಾಲದಲ್ಲಿ ಇದೆ. == ಉಲ್ಲೇಖಗಳು ಮತ್ತು ಟಿಪ್ಪಣಿ == === ಟಿಪ್ಪಣಿ === === ಉಲ್ಲೇಖಗಳು === == ಹೊರಗಿನ ಕೊಂಡಿಗಳು == ಡೇವಿಡ್ ವುಡಾರ್ಡ್ ಡೇವಿಡ್ ವುಡಾರ್ಡ್ : cb16616878t : 1014196620 : 174755630 :